ಉದ್ಯೋಗ ಮಾಹಿತಿ
ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ವಿವಿಧ ಬೋಧಕೇತರ ಹುದ್ದೆಗಳಿಗೆ ಹೈದ್ರಾಬಾದ್-ಕರ್ನಾಟಕ ಮೀಸಲಾತಿ ನಿಯಮ ಅನುಚ್ಛೇದ 371 (ಜೆ) ರನ್ವಯ
ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನುಆಹ್ವಾನಿಸಲು ಈ ಮೂಲಕ ಅಧಿಸೂಚಿಸಲಾಗಿದೆ.
ಸದರಿ ಅನುಚ್ಛೇದ 371 (ಜೆ) ರ ನಿಯಮಗಳನುಸಾರ ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು
ವಿಶ್ವವಿದ್ಯಾನಿಲಯದ ವೆಬ್‌ಸೈಟ್ https://ksoumysuru.ac.in/ ನಿಂದ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿಕೊಂಡು, ಅರ್ಜಿಗಳನ್ನು
08(ಎಂಟು) ಸೆಟ್‌ಗಳಲ್ಲಿ ಭರ್ತಿ ಮಾಡಿ ಸಂಬಂಧಪಟ್ಟ ಹುದ್ದೆಗಳಿಗೆ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಅರ್ಜಿಗಳೊಂದಿಗೆ ಲಗತ್ತಿಸಿ (ಎಲ್ಲಾ ಎಂಟು ಸೆಟ್ ಅರ್ಜಿಗಳಿಗೆ)ಲಕೋಟೆಯಲ್ಲಿರಿಸಿ, ಲಕೋಟೆಯ ಮೇಲೆ “ಹೈದ್ರಾಬಾದ್ – ಕರ್ನಾಟಕ ಸ್ಥಳೀಯ ಬೋಧಕೇತರ ಹುದ್ದೆಗಾಗಿ ಅರ್ಜಿ ಮತ್ತು ಹುದ್ದೆಯ ಹೆಸರು” ಅನ್ನು ನಮೂದಿಸಿ,ದಿನಾಂಕ 30.09.2023ರ ಸಂಜೆ 4.00ಗಂಟೆರೊಳಗೆ – ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ, ಮೈಸೂರು – 570 006, ಇವರಿಗೆ ನೋಂದಣಿ ಅಂಚೆ ಅಥವಾ ಮುದ್ದಾಂ (ಖುದ್ದಾಗಿ) ತಲುಪುವಂತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನುಸ್ವೀಕರಿಸಲಾಗುವುದಿಲ್ಲ. ಪ್ರಸ್ತುತ ಸೇವೆಯಲ್ಲಿರುವ ಅಭ್ಯರ್ಥಿಗಳು ಸಹ ಅರ್ಜಿಗಳನ್ನು ಸಮುಚಿತ ಮಾರ್ಗದಲ್ಲಿ ಮೇಲ್ಕಂಡ ದಿನಾಂಕದೊಳಗೆ ಸಲ್ಲಿಸಲು ತಿಳಿಸಲಾಗಿದೆ.