ಮುಂಬಯಿ: ಭಾರತದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಬರೋಬ್ಬರಿ 1,000 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್ ಖರೀದಿಸಿದ್ದಾರೆ. ಇದು ಭಾರತೀಯನೊಬ್ಬ ಖರೀದಿಸಿದ ದುಬಾರಿ ವಿಮಾನ ಎನಿಸಿಕೊಂಡಿದೆ.
ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್-9 ವಿಮಾನ ಇದಾಗಿದ್ದು, ಆ.27ರಂದು ಭಾರತಕ್ಕೆ ಬಂದಿಳಿದಿದೆ. ವಿಶಾಲವಾದ ಕ್ಯಾಬಿನ್ ಮತ್ತು ಕಾರ್ಗೋ ಸ್ಥಳವನ್ನು ಈ ವಿಮಾನ ಹೊಂದಿದ್ದು, ಒಂದು ಬಾರಿ ಇಂಧನ ತುಂಬಿದರೆ 11,770 ಕಿ.ಮೀ. ದೂರ ಸಂಚರಿಸಲಿದೆ. ಈ ವಿಮಾನವನ್ನು ಸ್ವಿಟ್ಸರ್ಲೆಂಡ್‌ನಲ್ಲಿ ಮಾರ್ಪಾಟು ಮಾಡಿದ ಬಳಿಕ ಭಾರತಕ್ಕೆ ತರಲಾಗಿದೆ.10 ಖಾಸಗಿ ವಿಮಾನ: ಬೋಯಿಂಗ್ ವಿಮಾನ ಖರೀದಿಯ ಬಳಿಕ ಅಂಬಾನಿ ಅವರ ಖಾಸಗಿ ವಿಮಾನಗಳ ಸಂಖ್ಯೆ 10ಕ್ಕೇರಿದಂತಾಗಿದೆ. ಬೋಯಿಂಗ್ ವಿಮಾನ ಅತ್ಯಾಧುನಿಕ ಸೌಲಭ್ಯಗಳ ಜತೆಗೆ ಹಲವು ಐಶಾರಾಮಿ ಸಾಧನ ಗಳನ್ನು ಹೊಂದಿದೆ. ಅಂಬಾನಿ ಬಳಿ ಈಗಾಗಲೇ ಏರ್‌ಬಸ್, ಬಾಂಬರ್‌ಡೈಯರ್, ಸಿಕೋರ್‌ಸ್ಕೈ ವಿಮಾನಗಳಿವೆ.ವಿಮಾನದ ವಿಶೇಷ
ವ್ಯಾಪ್ತಿ: 11,770 ಕಿ.ಮೀ. ಹಾರಬಲ್ಲ ಸಾಮರ್ಥ್ಯ
ಬೆಲೆ: 1000 ಕೋಟಿ ರೂ. (ಮಾರ್ಪಾಟು ಸೇರಿ)