ಅತಿಥಿ ಶಿಕ್ಷಕರ ನೇಮಕ : ಅರ್ಜಿ ಆಹ್ವಾನ

ಕಾರವಾರ : ಪ್ರಸಕ್ತ ಸಾಲಿಗೆ ಉತ್ತರ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಮುಂಡಗೋಡ, ಹಳಿಯಾಳ, ಬೆಟ್ಕುಳಿ(ಕುಮಟಾ) ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೌಲಾನಾ ಆಜಾದ ಮಾದರಿ ಶಾಲೆ(ಆಂಗ್ಲ ಮಧ್ಯಮ)ಗೆ ವಿವಿಧ ವಿಷಯಗಳಿಗೆ ಅರ್ಹ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅತಿಥಿ ಶಿಕ್ಷಕರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೌಲಾನಾ ಆಜಾದ ಮಾದರಿ ಶಾಲೆ ( ಆಂಗ್ಲ ಮಾಧ್ಯಮ) ಮುಖ್ಯೋಪಾಧ್ಯಾಯರು ಮುಂಡಗೋಡ-9008841149, ಹಳಿಯಾಳ-9611038069, ಬೆಟ್ಕುಳಿ(ಕುಮಟಾ)-9945331605 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಾರವಾರ ದೂ.ಸಂ: 08382-220336ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
…..

Latest Indian news

Popular Stories