ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ 77ನೇ ಸ್ವಾತಂತ್ರ್ಯೋತ್ಸವ

ಪಕ್ಕಲಡ್ಕ : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಬಜಾಲ್ ನಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಕಾರ್ಪೊರೇಷನ್ ಕಂಕನಾಡಿ ಬಿ ವಾರ್ಡ್ ಇದರ ಕಾರ್ಪುರೇಟರ್ ಪ್ರವೀಣ್ ಚಂದ್ರ ಆಳ್ವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ನಂತರ ಅತಿಥಿಗಳಾದ ಜಮಾಅತ್ ಇಸ್ಲಾಮಿ ಪಕ್ಕಲಡ್ಕ ವರ್ತುಲದ ಸಂಚಾಲಕ ಸುಲೈಮಾನ್ ಪಕ್ಕಲಡ್ಕ, ಜಮಾಅತೇ ಇಸ್ಲಾಮೀ ಜಿಲ್ಲಾಧ್ಯಕ್ಷ ಅಬ್ದುಲ್ ಗಫೂರ್, ಹೆತ್ತವರ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಬಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಾಲಾ ಸಂಚಾಲಕರಾದ ಯೂಸುಫ್ ಪಕ್ಕಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಹಸ್ನಾ ಫಾತಿಮಾ, ತಸ್ಕಿಯಾ ಕಿರಾತ್ ಪಠಿಸಿದರು. ಹೈ ಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ದೇಶ ಭಕ್ತಿ ಗೀತೆ ಹಾಡಿದರು. ಮುಖ್ಯೋಪಾಧ್ಯಾಯಿನಿ ಖುರೇಷಾ ನುಶ್ರತ್ ಸ್ವಾಗತಿಸಿದರು, ಶಿಕ್ಷಕಿ ಚೈತ್ರ ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಅಶೀರುದ್ದೀನ್ ಮಾಸ್ಟರ್ ಸಾರ್ತಬೈಲ್ ಧನ್ಯವಾದವಿತ್ತರು.

IMG 20230815 WA0014 ಸಂಘ ಸಂಸ್ಥೆ

Latest Indian news

Popular Stories