ಟ್ರಕ್ ಡಿಕ್ಕಿ ಹೊಡೆದು ಬಸ್ಸಿನ ಫುಟ್‌ಬೋರ್ಡ್ ಮೇಲೆ ನಿಂತಿದ್ದ 3 ವಿದ್ಯಾರ್ಥಿಗಳ ದಾರುಣ ಅಂತ್ಯ

ತಮಿಳುನಾಡು: ಬಸ್ಸಿನ ಫುಟ್‌ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿಗಳಿಗೆ ಟ್ರಕ್ಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ ನಡೆದಿದೆ.

ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನ ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನಿಂತಿದ್ದಾಗ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ಸಿರುಕನಲ್ಲೂರು ತಲುಪಿದ ವೇಳೆ ಕಂಟೈನರ್ ಲಾರಿಯೊಂದು ಬಸ್ಸಿನ ಸನಿಹಕ್ಕೆ ಬಂದು ಡಿಕ್ಕಿಯಾಗಿದೆ ಈ ವೇಳೆ ಫುಟ್‌ಬೋರ್ಡ್ ಮೇಲೆ ನಿಂತಿದ್ದ ಮೂವರು ವಿದ್ಯಾರ್ಥಿಗಳು ಎರಡು ವಾಹನಗಳ ನಡುವೆ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದ ಕಾರಣ ಮೂವರು ವಿದ್ಯಾರ್ಥಿಗಳು ಫುಟ್‌ಬೋರ್ಡ್ ಮೇಲೆ ನಿಂತು ದೇಹದ ಭಾಗ ಬಸ್ಸಿನಿಂದ ಹೊರಗಿತ್ತು ಎನ್ನಲಾಗಿದೆ.

ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಾಯವಾಗಿದ್ದು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ವಿಷಯ ತಿಳಿದ ಮೇಲ್ಮರುವತ್ತೂರು ಪೊಲೀಸರು ಸ್ಥಳಕ್ಕೆ ಧಾವಿಸಿ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹ ಭಾಗಗಳನ್ನು ಸೇರಿಸಿ ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories