ಮೆಯುತ್ತಿದ್ದ ಹಸುಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು 4 ಹಸು,1 ಕರು ಬಲಿ

WhatsApp Image 2023 10 01 at 4.48.01 PM Accident News, Featured Story, Kodagu, State News
ಕೊಡಗು: ಪೊನ್ನಂಪೇಟೆ ಸಮೀಪ ಮತ್ತೂರು ಗ್ರಾಮದಲ್ಲಿ ವಿದ್ಯುತ್ ತುಂಡಾಗಿ ಗದ್ದೆಯಲ್ಲಿ ಮೇಯುತಿದ್ದ ನಾಲ್ಕು ಹಸು,ಒಂದು ಕರು ಸೇರಿ 5 ಜಾನುವಾರುಗಳು ವಿದ್ಯುತ್ ಆಘಾತದಿಂದ ಮರಣ ಪಟ್ಟಿದೆ.
ಗ್ರಾಮದ ಆಲೆಮಾಡ ನಾಣಯ್ಯ ಅವರಿಗೆ ಸೇರಿದ ಹಸುಗಳನ್ನು ಭಾನುವಾರ ಮಧ್ಯಾಹ್ನ ಮೇಯಲು ಬಿಡಲಾಗಿತ್ತು. ಗದ್ದೆಯಲ್ಲಿ ವಿದ್ಯುತ್ ಮಾರ್ಗದ ಎಲ್ .ಟಿ ಮಾರ್ಗದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಹಾಗೂ ಗದ್ದೆಯಲ್ಲಿ ತೇವಾಂಶ ಇದ್ದಿದ್ದರಿಂದ ವಿದ್ಯುತ್ ಹರಿದು ಸ್ಥಳದಲ್ಲಿಯೇ ಐದು ಜಾನುವಾರುಗಳು ಮರಣ ಪಟ್ಟಿವೆ. ಇದರಲ್ಲಿ ಎರಡು ಹಸುಗಳನ್ನು ಹಾಲು ಕರೆಯಲಾಗುತ್ತಿತ್ತು ಎಂದು ತಿಳಿದುಬಂದಿದೆ .ವಿದ್ಯುತ್ ತಂತಿ ತುಂಡಾಗಿ ಬೀಳಲು ಇಲಾಖೆಯ ನಿರ್ಲಕ್ಷ ಹಾಗೂ ಶಿಥಿಲಾವಸ್ಥೆಯ ಮಾರ್ಗವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.ಸೆಸ್ಕ್ ಇಲಾಖೆ ಸೂಕ್ತ ಪರಿಹಾರ ನೀಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ

Latest Indian news

Popular Stories