ಚಲಿಸುತಿದ್ದ ಬೈಕ್’ಗೆ ಕಾರು ಡಿಕ್ಕಿ – ಇಬ್ಬರು ಮೃತ್ಯು

ಬೀದರ್: ಚಲಿಸುತಿದ್ದ ಬೈಕ್’ಗೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಅಷ್ಟೂರ ರಿಂಗ್ ರಸ್ತೆಯಲ್ಲಿ ಜರುಗಿದೆ.

ನೆರೆಯ ತೆಲಂಗಾಣಾದ ಪುಸಲಪಾಡ ಗ್ರಾಮದ ನಿವಾಸಿ ಬಸವರಾಜ ಮಾರುತಿ(50) ಹಾಗೂ ಮಣ್ಣೂರ ಗ್ರಾಮದ ನಿವಾಸಿ ರಾಮಗೊಂಡ ನಾಗೊಂಡ(60) ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರರಾಗಿದ್ದಾರೆ.

ಸುದ್ದಿ ತಿಳಿದ ಬೀದರ್ ನಗರ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದೆ

Latest Indian news

Popular Stories