ಅಂಬಾಗಿಲು-ಪೆರಂಪಳ್ಳಿ ರಸ್ತೆ | ಕಮರಿಗೆ ಉರುಳಿದ ಕಾರು; ತಪ್ಪಿದ ಭಾರೀ ಅನಾಹುತ

ಮಣಿಪಾಲ: ಇಲ್ಲಿನ ಠಾಣೆ ವ್ಯಾಪ್ತಿಯ ಮಣಿಪಾಲದಿಂದ ಅಂಬಾಗಿಲು ಕಡೆಗೆ ಹೋಗುತ್ತಿದ್ದ ಕಾರೊಂದು ಪೆರಂಪಳ್ಳಿ ರೈಲ್ವೇ ಸೇತುವೆ ಬಳಿ ನಿಯಂತ್ರಣ ತಪ್ಪಿ ಕಮರಿಗೆ ಇಳಿದ ಘಟನೆ ಸೋಮವಾರ ಸಂಭವಿಸಿದೆ.

ಪಕ್ಕದಲ್ಲೇ ಇತ್ತು ಟ್ರ್ಯಾಕ್‌ .ಗಿಡಗಂಟಿಗಳಿಂದ ಆವೃತವಾಗಿರುವ ಗುಂಡಿಗೆ ಬಿದ್ದ ಪರಿಣಾಮ ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕಾರು ಉರುಳಿದ ಭಾಗದಲ್ಲಿ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿದ್ದಲ್ಲಿ ರೈಲ್ವೇ ಟ್ರ್ಯಾಕ್‌ ಗುಂಡಿಗೆ ಬಿದ್ದು ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

Latest Indian news

Popular Stories