ಬ್ರಹ್ಮಾವರ: ಯುವಕನಿಗೆ ವಾಹನ ಡಿಕ್ಕಿ – ಮೃತ್ಯು

ಬ್ರಹ್ಮಾವರ: ಶನಿವಾರ ರಾತ್ರಿ ಯೇಸ್ ಗೂಡ್ಸ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಮೃತರನ್ನು ಸುದರ್ಶನ್ (38) ಎಂದು ಗುರುತಿಸಲಾಗಿದೆ. ಕುಂಜಾಲಿನ ಆಭರಣ ಗೇಟ್‌ ಮುಂಭಾಗದಲ್ಲಿ TATA ACE ವಾಹನ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಅಪಘಾತದಿಂದ ಅವರ ತಲೆಗೆ ತೀವ್ರ ತರಹದ ಗಾಯವಾಗಿದ್ದು ಅಂಬುಲೆನ್ಸ್‌ನಲ್ಲಿ ಚಿಕಿತ್ಸೆಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ರಾತ್ರಿ 9:00 ಗಂಟೆಗೆ ದಾರಿ ಮದ್ಯದಲ್ಲಿ ಗಾಯಾಳು ಮೃತ ಪಟ್ಟಿರುವುದಾಗಿ ಖಾತ್ರಿ ಪಡಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2024 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories