ಕಾರವಾರ: ಕಾರ್ – ಬೈಕ್ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗಾಂವ್ ಗೇರಿ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿನೋದ ನಾಯ್ಕ (30) ಮೃತಪಟ್ಟ ದುರ್ದೈವಿ. ಕಾರವಾರ ಕಾಜೂಭಾಗ ನಿವಾಸಿಯಾದ ವಿನೋದ ಮಾಜಾಳಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಗಾಂವಗೇರಿ ಬಳಿ ಎದುರಿನಿಂದ ಬಂದ. ಕಾರ್ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಚಿತ್ತಾಕುಲ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
….