ಕುಂಭಮೇಳಕ್ಕೆ​ ತೆರಳುತ್ತಿದ್ದ ಕ್ರೂಸರ್​ ವಾಹನ ಅಪಘಾತ: ಬೆಳಗಾವಿಯ ನಾಲ್ವರ ಸಾವು

ಮಧ್ಯಪ್ರದೇಶದ (Madhya Pradesh) ಜಬಲಪೂರ ಪೆಹರಾ‌ ಟೋಲ್ ನಾಕಾ ಬಳಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ (Gokak) ನಗರದ ನಾಲ್ವರು ಮೃತಪಟ್ಟಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ, ಬಸವರಾಜ ಕುರಟ್ಟಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕ್ರೂಸರ್ ವಾಹನದಲ್ಲಿ ಭಕ್ತರು ಪ್ರಯಾಗ್‌ರಾಜ್​ನ ಕುಂಭಮೇಳಕ್ಕೆ (Prayagraj Kumbh Mela) ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸೋಮವಾರ (ಫೆ.24) ಬೆಳಗಿನ ಜಾವ ಅಪಘಾತ ಸಂಭವಿಸಿದೆ. ಕ್ರೂಸರ್ ನಿಂತಿದ್ದ ಬಸ್​ಗೆ ಡಿಕ್ಕಿ ಹೊಡೆದಿದೆ.

Latest Indian news

Popular Stories