Tragedy | ಪ್ರವಾಸದಿಂದ ವಾಪಾಸಾಗುವ ವೇಳೆ ಅಪಘಾತ: 18 ತಿಂಗಳ ಮಗು ಸೇರಿ ಒಂದೇ ಕುಟುಂಬದ ನಾಲ್ವರು ವೈದ್ಯರ ದಾರುಣ ಮೃತ್ಯು

ಜೈಪುರ: ರಾಜಸ್ಥಾನದ ಬಿಕೆನರ್​​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 18 ತಿಂಗಳ ಮಗು ಕೂಡ ಸಾವನ್ನಪ್ಪಿದೆ.

ಬಿಕೆನರ್​​ನ ಭರತ್ಮಲಾ ಹೈವೇನಲ್ಲಿ SUV ವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಮೃತ ನಾಲ್ವರು ಕೂಡ ವೈದ್ಯರಾಗಿದ್ದರು.

ಡಾಕ್ಟರ್ ಪ್ರತೀಕ್, ಇವರ ಪತ್ನಿ ಡಾಕ್ಟರ್ ಹೇಟಲ್, ಡಾಕ್ಟರ್ ಪೂಜಾ ಇವರ ಪತಿ ಡಾ. ಕರಣ್ ಮೃತ ದುರ್ದೈವಿಗಳು. ಪೂಜಾ ಮತ್ತು ಕರಣ್ ಅವರ ಒಂದೂವರೆ ವರ್ಷದ ಹೆಣ್ಣು ಮಗು ಕೂಡ ಸಾವನ್ನಪ್ಪಿದೆ.

ಇವರು ಗುಜರಾತ್​ನ ಕಚ್ ನಿವಾಸಿಗಳಾಗಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದರು, ವಾಪಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಒಳಗಾಗಿರುವ ವೈದ್ಯಾಧಿಕಾರಿಗಳ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

Latest Indian news

Popular Stories