ಹಾವೇರಿ: ಟಿಟಿ ವಾಹನ – ಲಾರಿ ನಡುವೆ ಭೀಕರ ಅಪಘಾತ: 12 ಮಂದಿ ಮೃತ್ಯು

ಹಾವೇರಿ: ಹಿಂಬದಿಯಿಂದ ಲಾರಿಗೆ ಟಿಟಿ ವಾಹನವೊಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ 12 ಜನರು ಮೃತಪಟ್ಟ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತರು ಸವದತ್ತಿಗೆ ದೇವರ ದರ್ಶನಕ್ಕೆಂದು ತೆರಳಿದ್ದರು. ಮರಳಿ ಊರಿಗೆ ಬರುವಾಗ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮೃತರೆಲ್ಲರೂ ಶಿವಮೊಗ್ಗ ಮೂಲದ ನಿವಾಸಿಗಳು ಎಂಬ ಮಾಹಿತಿ ಇದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ.

ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶುಕ್ರವಾರ) ಬೆಳಗ್ಗೆ ನಡೆದಿದೆ.

ಈ ದಿನ.ಕಾಮ್ ಮಾಧ್ಯಮ ಬ್ಯಾಡಗಿ ಪೋಲಿಸರನ್ನು ಸಂಪರ್ಕಿಸಿದಾಗ, “ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಒಟ್ಟು 16 ಮಂದಿ ಟಿಟಿ ವಾಹನದಲ್ಲಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ‌. ಮೃತಪಟ್ಟವರು ಭದ್ರಾವತಿ ಮೂಲದವರು ಅಂತ ತಿಳಿದು ಬಂದಿದೆ. ಮೃತಪಟ್ಟವರ ವಿವರಗಳನ್ನು ಕಲೆ ಹಾಕುತ್ತಿದ್ದೇವೆ” ಎಂದು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Latest Indian news

Popular Stories