ಕಾರವಾರ:ಜೆಸಿಬಿ, ಬೈಕ್ ನಡುವೆ ಇಂದು ಬೆಳಿಗ್ಗೆ
ಮುಖಾಮುಖಿ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕುಮಟಾ ಬಳಿ ಹಾರೋಸಿ ಕ್ರಾಸ್ ನಲ್ಲಿ ನಡೆದಿದೆ. ಬೈಕ್ ಸವಾರ ಮಂಜುನಾಥ ನಾಗಪ್ಪ ನಾಯ್ಕ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಮಟಾ ದಿಂದ ಹೊನ್ನಾವರದ ಹೊದಿಕೆ ಶಿರೂರು ಗ್ರಾಮಕ್ಕೆ ತೆರಳುತ್ತಿದ್ದರು. ಎದುರಿಗೆ ಬಂದ ಜೆಸಿಬಿ ಗೆ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.