ಕುಂದಾಪುರ:ಬೀಜಾಡಿಯಲ್ಲಿ ಕಡಲಬ್ಬರಕ್ಕೆ ಸಿಕ್ಕು ನೀರುಪಾಲದ ಯುವಕ – ಶೋಧ


ಕುಂದಾಪುರ: ಸ್ನೇಹಿತನ ಮನೆಯಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದು ಈ ವೇಳೆ ಓರ್ವ ಅಲೆಗಳ ರಬಸಕ್ಕೆ ಸಿಕ್ಕು ಕೊಚ್ಚಿಹೋದ ಘಟನೆ ಬುಧವಾರ ಸಂಜೆ ವೇಳೆ ಕುಂದಾಪುರ ತಾಲೂಕಿನ ಬೀಜಾಡಿ ಎಂಬಲ್ಲಿ ನಡೆದಿದೆ.

ತಿಪಟೂರು ಮೂಲದ ಯೋಗೀಶ್ (23) ನೀರು ಪಾಲಾದವರು. ಇನ್ನೋರ್ವನನ್ನು ರಕ್ಷಣೆ ಮಾಡಲಾಗಿದೆ.

ಘಟನೆ ಹಿನ್ನೆಲೆ: ಸಮುದ್ರಕ್ಕೆ ತೆರಳಿದ ಇಬ್ಬರು ತಿಪಟೂರು ಮೂಲದವರಾಗಿದ್ದು ಗುರುವಾರ ‌ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ಮೇಹಿತನ ಆಮಂತ್ರಣದ ಮೇಲೆ ಬೀಜಾಡಿಗೆ ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದು ನೀರಿಗಿಳಿದ ಯೋಗೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಆತನ ಸ್ನೇಹಿತನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಇತ್ತೀಚಿನ ಒಂದೆರಡು ದಿನದಿಂದ ಗಾಳಿ-ಮಳೆ ಇರುವ ಕಾರಣ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದೆ. ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟರು.

ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಯು.ಬಿ ನಂದಕುಮಾರ್, ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

Latest Indian news

Popular Stories