ಕುಂದಾಪುರ: ಅಪರಿಚಿತ ವಾಹನ ಡಿಕ್ಕಿ – ಪಾದಚಾರಿ ಮೃತ್ಯು

ಕುಂದಾಪುರ: ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ 8.30 ಕ್ಕೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಜಾಲಾಡಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ಬೈಂದೂರು ಏಕಮುಖ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅಪರಿಚಿತ ವಾಹನ ಚಾಲಕ ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ತನ್ನ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ಹೆಮ್ಮಾಡಿ ಜಾಲಾಡಿಯ ಬಸವರಾಜ ಎಂಬವರ ಸ್ಟಿಕ್ಕರ್‌ಕಟ್ಟಿಂಗ್‌ ಶಾಪ್‌ ಎದುರು ರಸ್ತೆಯನ್ನು ದಾಟಲು ನಿಂತುಕೊಂಡಿದ್ದ ವಿಠಲ್‌(46) ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಯ ಮೇಲೆ ಬಿದ್ದು ಅವರ ತಲೆಗೆ ಮತ್ತು ಎಡ ಕಾಲಿಗೆ ಗಂಭೀರ ಗಾಯವಾಗಿತ್ತು.

ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ್‌ ವಾಹನದಲ್ಲಿ ಕರೆದುಕೊಂಡು ಬಂದಾಗ ಇಲ್ಲಿ ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ದೃಢ ಪಡಿಸಿರುತ್ತಾರೆ.

ಅಪರಿಚಿತ ವಾಹನ ಚಾಲಕ ಅಪಘಾತ ಪಡಿಸಿದ ನಂತರ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಗಾಯಾಳುವಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡದೇ ಪೊಲೀಸರಿಗೂ ಮಾಹಿತಿ ನೀಡದೇ ವಾಹನವನ್ನು ಹೆಮ್ಮಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26 /2024 ಕಲಂ: 279, 304(A) ಐಪಿಸಿ & 134 (A)&(B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories