ಮಲ್ಪೆ: ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ಗರಡಿಮಜಲ್ ವೀರಮಾರುತಿ ಭಜನಾ ಮಂದಿರದ ಬಳಿ ರಸ್ತೆ ದಾಟುತ್ತಿರುವಾಗ ವ್ಯಕ್ತಿಯೊರ್ವರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಗೋಪಾಲ (81) ಎಂದು ಗುರುತಿಸಲಾಗಿದೆ.
ತೆಂಕನಿಡಿಯೂರು ಗ್ರಾಮದ ಗರಡಿಮಜಲ್ ವೀರಮಾರುತಿ ಭಜನಾ ಮಂದಿರದ ಬಳಿ ರಸ್ತೆ ದಾಟುತ್ತಿರುವಾಗ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಗೋಪಾಲ ಅವರು ರಸ್ತೆಗೆ ಬಿದ್ದು, ಅವರ ತಲೆಗೆ, ಬೆನ್ನಿಗೆ, ಎಡಕೈಗೆ ಹಾಗೂ ಎಡಕಾಲಿಗೆ ರಕ್ತಗಾಯವಾಗಿ ಪ್ರಜ್ಞಾಹೀನರಾದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 147/2024 , ಕಲಂ: 281, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.