ಮಣಿಪಾಲ: ಬೈಕ್ ಡಿವೈಡರ್’ಗೆ ಡಿಕ್ಕಿ – ಸಹ ಸವಾರ ಮೃತ್ಯು

ಸಾಂದರ್ಭಿಕ ಚಿತ್ರ

ಮಣಿಪಾಲ: ವಿ. ಪಿ. ನಗರ ಎಂಬಲ್ಲಿ ರಾಷ್ಟ್ರೀಯ. ಹೆದ್ದಾರಿ 169ಎ ರಲ್ಲಿ ಬೈಕ್ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ಮೃತಪಟ್ಟಿದ್ದಾನೆ.

ಮೃತಪಟ್ಟ ಸಹ ಸವಾರನನ್ನು ಅದ್ವೈತ್ ಎಂದು ಗುರುತಿಸಲಾಗಿದೆ.

ಬೈಕ್ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಪ್ರತೀಕ್‌ ಹಾಗೂ ಸಹ ಸವಾರ ಅದ್ವೈತ್‌ರವರು ರಸ್ತೆಗೆ ಬಿದ್ದು, ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಹ ಸವಾರ ಅದ್ವೈತ್‌ ರವರು ಮೃತಪಟ್ಟಿರುವುದು ಧೃಡಪಟ್ಟಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2024 ಕಲಂ: 279, 337, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories