ಮಣಿಪಾಲ: ಡಿವೈಡರ್’ಗೆ ಸ್ಕೂಟರ್ ಡಿಕ್ಕಿಯಾಗಿ ಯುವಕ ಮೃತ್ಯು

ಮಣಿಪಾಲ: ಯುವಕನೋರ್ವ ಸ್ಕೂಟರ್’ನಲ್ಲಿ ಹೋಗುತ್ತಿದ್ದಾಗ ಡಿವೈಡರ್’ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.

ಮೃತನನ್ನು ಹೊಟೆಲ್’ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೇಶವ (18) ಎಂದು ಗುರುತಿಸಲಾಗಿದೆ.

ಡಿ.ಸಿ ಆಪೀಸ್ ರಸ್ತೆಯಲ್ಲಿ ಅಪಘಾತವಾಗಿದ್ದು ಕೂಡಲೇ ಒಂದು ಅಟೋ ರಿಕ್ಷಾದಲ್ಲಿ ಕೆ.ಎಂ.ಸಿ ಆಸ್ಪತ್ರೆಗ ಕರೆದುಕೊಂಡು ಹೋಗಲಾಗಿತ್ತು. ಅಪಘಾತ ಸ್ಥಳದಲ್ಲಿ ಆತನನ್ನು ನೋಡಿದಾಗ ಮುಖಕ್ಕೆ ಗಂಭೀರವಾಗಿ ಗಾಯವಾಗಿ ಮಾತನಾಡುತ್ತಿರಲಿಲ್ಲ, ವೈದ್ಯರು ಕೇಶವ್ ರವರನ್ನು ಪರೀಕ್ಷಿಸಿ ಆತ ಮೃತಪಟ್ಟಿರುವುದಾಗಿ ರಾತ್ರಿ 09:50 ಗಂಟೆಗೆ ತಿಳಿಸಿರುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2024 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories