ಕಾರು ರಿವರ್ಸ್ ಹೋಗಿ ಬಿದ್ದದ್ದು ಮುನ್ನೂರು ಅಡಿ ಆಳಕ್ಕೆ; ಮಹಿಳೆ ಮೃತ್ಯು – ವೀಡಿಯೋ ನೋಡಿದರೆ ಶಾಕ್ ಆಗುತ್ತೆ!

ಮಹಾರಾಷ್ಟ್ರದಲ್ಲಿ ಕಾರನ್ನು ರಿವರ್ಸ್ ಮಾಡ 300 ಅಡಿಗಳಷ್ಟು ಕಮರಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಮಹಿಳೆಯ ಸ್ನೇಹಿತೆ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಆಕೆ ಡ್ರೈವಿಂಗ್ ಕಲಿಯುತ್ತಿರುವುದನ್ನು ವಿಡಿಯೋ ಮಾಡುತ್ತಿದ್ದ. 

ವೀಡಿಯೊದಲ್ಲಿ, 23 ವರ್ಷದ ಶ್ವೇತಾ ದೀಪಕ್ ಸುರ್ವಾಸೆ ಚಾಲಕನ ಸೀಟಿನಲ್ಲಿ ಕೂತು ರಿವರ್ಸ್ ಮಾಡುವ ವೀಡಿಯೋ ವೈರಲಾಗಿದೆ.

ಆಕೆಯ ಸ್ನೇಹಿತ ಸೂರಜ್ ಸಂಜೌ ಮುಲೆ, 25, ಆಕೆಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಇಬ್ಬರು ಸ್ನೇಹಿತರು ಸೋಮವಾರ ಮಧ್ಯಾಹ್ನ ಔರಂಗಾಬಾದ್‌ನಿಂದ ಸುಲಿಭಂಜನ್ ಹಿಲ್ಸ್‌ಗೆ ಪ್ರಯಾಣ ಬೆಳೆಸಿದ್ದರು. ಮೊದಲು ನಿಧನವಾಗಿ ರಿವರ್ಸ್ ಹೋಗುತ್ತ ವೇಗವಾಗಿ ಹಿಂದೆ ಸಾಗಿದ್ದಾರೆ. ಗೆಳೆಯ ಕ್ಲಚ್ ಕ್ಲಚ್ ಎನ್ನುವ ವೀಡಿಯೋ ವೈರಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು 300 ಅಡಿ ಎತ್ತರದ ಬಂಡೆಯ ಕೆಳಗೆ ಉರುಳಿ ಕಮರಿಗೆ ಬಿದ್ದಿದೆ. ದೃಶ್ಯಗಳಲ್ಲಿ ವಾಹನದ ನಜ್ಜುಗುಜ್ಜಾದ ಅವಶೇಷಗಳು ಪತ್ತೆಯಾಗಿದೆ.

 

Latest Indian news

Popular Stories