ಉ.ಕ | ರಸ್ತೆ ಅಪಘಾತ : ತಾಯಿ ಮಗಳ ದುರ್ಮರಣ

ಕಾರವಾರ : ಹೊನ್ನಾವರದ ಮಂಕಿ ಗ್ರಾಮದ ಗುಳದ‌ಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಆರ್‌‌‌ಟಿಸಿ ಬಸ್‌ ಹಾಗೂ ಎಕ್ಟಿವಾ ಹೊಂಡಾ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ‌,ಮಗಳಿಬ್ಬರೂ ಬಸ್ ಚಕ್ರದಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಸವಿತಾ ಆಚಾರಿ (40), ಅಂಕಿತಾ (17) ಅಪಘಾತದಲ್ಲಿ ಮೃತಪಟ್ಟ ತಾಯಿ ಮತ್ತು ಆಕೆಯ ಮಗಳಾಗಿದ್ದಾರೆ. ಇವರು ಎಕ್ಟಿವಾ ಹೊಂಡಾ ವಾಹನದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ‌ ಇಬ್ಬರೂ ಸ್ಥಳದಲ್ಲೇ‌ ಸಾವನ್ನಪ್ಪಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಮಂಗಳೂರು ಕಡೆಯಿಂದ ಬೆಳಗಾವಿಗೆ ಚಲಿಸುತ್ತಿದ್ದು,ಈ ವೇಳೆ ಎಕ್ಟಿವಾ ಹೊಂಡಾ ದ್ವಿಚಕ್ರವಾಹನ ಸವಾರರನ್ನ ತಪ್ಪಿಸಲು ಹೋದ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.ಇನ್ನೂ ಅಪಘಾತವಾಗಿರುವ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories