ಲಾರಿಯಡಿಗೆ ಬಿದ್ದ ಸ್ಕೂಟರ್‌ ; ತಾಯಿ – ಮಗಳು ಅಪಾಯದಿಂದ ಪಾರು

ಕುಂದಾಪುರ: ಲಾರಿಯಡಿಗೆ ಸ್ಕೂಟರ್‌ ಬಿದ್ದ ಘಟನೆ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ ಜಂಕ್ಷನ್‌ ಬಳಿ ರವಿವಾರ ಬೆಳಗ್ಗೆ 10ರ ಸುಮಾರಿಗೆ ಸಂಭವಿಸಿದೆ. ಅದೃಷ್ಟವಶಾತ್‌ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ತಾಯಿ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಣ್ಣ ಪುಟ್ಟ ಗಾಯಗೊಂಡವರು ರೋಸಿ ಹಾಗೂ ಅವರ ಪುತ್ರಿ ರೆನಿಸ್‌ ಎಂದು ಗುರುತಿಸಲಾಗಿದೆ. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಯು ಹರಿಯಾಣದಿಂದ ಕೋಯಿಕ್ಕೋಡ್‌ಗೆ ಸಂಚರಿಸುತ್ತಿತ್ತು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸ್ಕೂಟರ್‌ ಸಂಪೂರ್ಣ ಜಖಂಗೊಂಡಿದೆ.
ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.

Latest Indian news

Popular Stories