ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್: ಸವಾರ ಮೃತ್ಯು

ರವಿವಾರ ಬೆಳಗ್ಗೆ ಸುಂಟಿಕೊಪ್ಪ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಅಣತಿ ದೂರದಲ್ಲಿ ಸ್ಕೂಟಿಗೆ ಇನ್ನೋವಾ ಕಾರು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯವಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಸವಾರ, ಕೆದಕಲ್ ಸೆವೆಂತ್ ಮೈಲ್ ನಿವಾಸಿ ಇಬ್ರಾಹಿಂ (60) ಅವರು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ನಿಧನರಾಗಿದ್ದಾರೆ.

ಸುಂಟಿಕೊಪ್ಪದಿಂದ ಕುಶಾಲನಗರದತ್ತ ತೆರಳುತ್ತಿದ್ದ ಸ್ಕೂಟಿಗೆ ಹಿಂಬದಿಯಲ್ಲಿ ಬರುತ್ತಿದ್ದ ಕೇರಳ ಕಣ್ಣೂರಿನ ಇನ್ನೋವಾ ಕಾರು ಡಿಕ್ಕಿಪಡಿಸಿತ್ತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories