ವಿದ್ಯುತ್ ತಂತಿ ಶಾಕ್ ನಿಂದ ಮಹಿಳೆ ಸಾವು ಶಂಕೆ‌

ಕಾರವಾರ: ತೋಟದ ಬೇಲಿಗೆ ಹರಿಯುತ್ತಿದ್ದ ವಿದ್ಯುತ್ ತಂತಿ ಶಾಕ್ ನಿಂದ ಮಹಿಳೆ ಸಾವನ್ನಪ್ಪಿರುವ ಶಂಕೆ‌ ಕುಮಟಾ ತಾಲ್ಲೂಕಿನ ಹರಕಡೆ ಗ್ರಾಮದಲ್ಲಿ ನಡೆದಿದೆ.


ಸುಶೀಲಾ ಅಂಬಿಗ (55) ಎಂಬ ಮಹಿಳೆ ಮನೆಗೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ತೋಟದ ಬೇಲಿಗೆ ಹರಿದ ವಿದ್ಯುತ್ ತಾಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಕೆಪಿಟಿಸಿಎಲ್ ವಿದ್ಯುತ್ ಲೈನ್ ತುಂಡಾಗಿ ,ತೋಟದ ಬೇಲಿ ಮೇಲೆ ಬಿದ್ದಿತ್ತೋ ಅಥವಾ ತೋಟದ ಬೇಲಿಗೆ ವಿದ್ಯುತ್ ಹರಿಸಲಾಗಿತ್ತೋ ಎಂಬುದರ ಪರಿಶೀಲನೆ ಹೆಸ್ಕಾಂ ಹಾಗೂ ಪೊಲೀಸರಿಂದ ನಡೆದಿದೆ.


ಶುಕ್ರವಾರ ಕರಾವಳಿಯಲ್ಲಿ ಭಾರೀ ಮಳೆ‌ ಕಾರಣ , ವಿದ್ಯುತ್ ಕಣ್ಣಾಮುಚ್ಚಾಲೆ ನಡದೇ ಇತ್ತು. ಈ ಪರಿಸ್ಥಿತಿಯಲ್ಲಿ ಮಹಿಳೆ ವಿದ್ಯುತ್ ಶಾಕ್ ಗೆ ಬಲಿಯಾಗಿರುವುದು ಕುಟುಂಬದವರಲ್ಲಿ ಅಘಾತ ತಂದಿದೆ.
…..

Latest Indian news

Popular Stories