ಬನಹಟ್ಟಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆಯಲ್ಲಿ ಈಜಲು ತೆರಳಿದ್ದ 6 ಬಾಲಕರ ಪೈಕಿ ಇಬ್ಬರು ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ 8.30ರ ಸುಮಾರಿಗೆ ಸಮೀಪದ ಹೊಸೂರಿನ ಬಾಲಕರು ಈಜಲು ತೆರಳಿದ್ದು, ಅದರಲ್ಲಿ ಹೊಸೂರಿನ ಸಂಜಯ ತಳವಾರ (13) ಹಾಗೂ ನಂದಗಾಂವದ ಸಮರ್ಥ ಜುಲ್ಪಿ (10) ಸಾವಿಗೀಡಾದ ಬಾಲಕರು.

ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬನಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Indian news

Popular Stories