ಉ.ಕ | ಲಾರಿ ಚಕ್ರದಡಿ ಸಿಲುಕಿ ಯುವಕನ ಸಾವು

ಕಾರವಾರ : ಅಂಕೋಲಾ ತಾಲೂಕಿನಲ್ಲಿ ಬಾಳೆಗುಳಿ ರಾಷ್ಟ್ರೀಯ ಹೆದ್ದಾರಿ 66ರ ವರದರಾಜ ಹೊಟೇಲ್ ಬಳಿ, ಲಾರಿಯ ಹಾಯ್ದು ಯುವಕನೋರ್ವ ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಶಿರಕುಳಿ ಗ್ರಾಮದ ಪ್ರಮೋದ ನಾರಾಯಣ ನಾಯ್ಕ (19 )ಮೃತ ದುರ್ದೈವಿ ಯುವಕನಾಗಿದ್ದಾನೆ. ಈತ ಲಾರಿ ಕ್ಲೀನರ್ ಮತ್ತಿತರ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಇನ್ನೊಂದು ಲಾರಿ ಚಕ್ರದಡಿ ಆಕಸ್ಮಿಕವಾಗಿ ಸಿಲುಕಿ ದುರ್ಮರಣ ಮೃತರಾಗಿದ್ದಾರೆ.

ಅಂಕೋಲಾದ ವರದರಾಜ ಹೋಟೆಲ್ ಬಳಿ ಉಪಹಾರ ಸೇವಿಸಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ‌. ಸುದ್ದಿ ತಿಳಿದ ಅಂಕೋಲಾ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿ. ಎಸ್ ಐ ಸುನೀಲ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಅಪಘಾತ ಮಾಡಿದ ವಾಹನ ಚಾಲಕನನ್ನು ವಶಕ್ಕೆ ಪಡೆದು ,‌ಪ್ರಕರಣ ದಾಖಲಿಸಲಾಗಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ್ ನಾಯ್ಕ, ಸ್ಥಳೀಯರಾದ ದತ್ತು, ಮೃತನ ಕುಟುಂಬ ಸಂಬಂಧಿಗಳು, ಮತ್ತಿತರರು ಸಹಕರಿಸಿದರು.
…..

Latest Indian news

Popular Stories