ಉ.ಕ | ಅಸ್ನೋಟಿ ಬಳಿ ಕಾರುಗಳ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಂಭೀರ ಗಾಯ

ಕಾರವಾರ: ಜಿಲ್ಲಾ ಕೇಂದ್ರಕ್ಕೆ ಸಮೀಪದ ಅಸ್ನೋಟಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಅಪರಾಹ್ನ ಸಂಭವಿಸಿದ ಅಪಘಾತದಲ್ಲಿ ಕಾರ್ ನಲ್ಲಿದ್ದವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.‌ ಸದಾಶಿವಗಡ ಕಡೆಯಿಂದ ಹೊರಟ ಕಾರು ಅಸ್ನೋಟಿ ಗ್ರಾಮದ ಬಳಿ, ಎದುರಿಗೆ ಬರುತ್ತಿದ್ದ ಕಾರ್ ಗೆ ಗುದ್ದಿದೆ. ಗಜಾನನ ಗಾಂವ್ಕರ್ ಮತ್ತು ಕುಟುಂಬದವರು ಉಳಗಾದಿಂದ ಕಾರವಾರಕ್ಕೆ ಬರುತ್ತಿದ್ದರು. ಅಸ್ನೋಟಿ ಕಾರ್ ನಲ್ಲಿದ್ದ ಮಸ್ಸಾ ಬಗೀಚ ಸಿಂಗ್ ಮೇಲೆ ನಿರ್ಲಕ್ಷ್ಯ ವಾಹನ ಚಾಲನೆಯ ದೂರು ದಾಖಲಾಗಿದೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖಾಮುಖಿ ಡಿಕ್ಕಿ ಯಿಂದ ಎರಡೂ ಕಾರ್ ಜಖಂ ಆಗಿವೆ.
…..

Latest Indian news

Popular Stories