ಉ.ಕ | ಬೈತಖೋಲ್ ಸಮುದ್ರ ಬ್ರೇಕ್ ವಾಟರ್ ಬಳಿ ದುರಂತ ; ತಾಯಿ ಮಗಳು ಮೃತ್ಯು

ಕಾರವಾರ: ಇಲ್ಲಿ ಬೈತಖೋಲ ಬಂದರು ಪ್ರದೇಶ ಬ್ರೇಕ್ ವಾಟರ್ ಬಳಿ ತಾಯಿ ಮಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಇದೀಗ ಬೆಳಕಿಗೆ ಬಂದಿದೆ. ರೇಣುಕಾ ಗೌಡ( ೪೦) , ಈಕೆಯ ಮಗಳು ಸುಜಾತ ಗೌಡ( ೨೩) ಮೃತಪಟ್ಟಿದ್ದು, ಇವರು ನೀಲಿ ಕಲ್ಗ ತೆಗೆಯಲು ಬ್ರೆಕ್ ವಾಟರ್ ಬಳಿ ಸಮುದ್ರಕ್ಕೆ ಇಳಿದಿದ್ದರು ಎನ್ನಲಾಗಿದೆ. ಇಬ್ಬರ ಮೃತದೇಹಗಳನ್ನು ಕರಾವಳಿ ಕಾವಲು ಪಡೆಯ ನೆರವಿನಿಂದ ಹೊರ ತೆಗೆಯಲಾಗಿದೆ. ಸಾವಿಗೆ ನೈಜ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ನಗರಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರೇಣುಕಾ ಮತ್ತು ಮಗಳು ಸುಜಾತ ಸಾವಿನ ಬಗ್ಗೆ ನಿಖರ‌ ಕಾರಣಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
…..

Latest Indian news

Popular Stories