Accident NewsUdupi
ಉಡುಪಿ | ಶಿರ್ವದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು

ಶಿರ್ವ: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ಪ್ರಿನ್ಸ್ ಪಾಯಿಂಟ್ ಬಳಿ ಬೈಕ್‌ಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ (ಮಾ. 1 ರಂದು) ಮಧ್ಯಾಹ್ನ ನಡೆದಿದೆ. ಢಿಕ್ಕಿ ಹೊಡೆದ ವಾಹನದ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಶಿರ್ವ ಇಂದ್ರಪುರ ನಿವಾಸಿ ವಿಜಯ ಶೆಟ್ಟಿ (55) ಮೃತಪಟ್ಟ ಬೈಕ್ ಸವಾರ. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಬೆಳ್ಳಣ್‌ನ ವೈನ್‌ಶಾಪ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಮಧ್ಯಾಹ್ನದ ಊಟಕ್ಕಾಗಿ ಶಿರ್ವದ ತಮ್ಮ ಮನೆಗೆ ಬರುತ್ತಿದ್ದರು. ಈ ವೇಳೆ ಪ್ರಿನ್ಸ್ ಪಾಯಿಂಟ್ ಬಳಿ ಎದುರಿನಿಂದ ಬಂದ ವಾಹನ ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಉಡುಪಿಯ ಆಸ್ಪತ್ರೆಗೆ ಕೊಂಡೊಯ್ದಿದ್ದು ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಶಿರ್ವಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.