ಉಡುಪಿ: ಕಾರಾವಾರದಿಂದ ಮಂಗಳೂರು ಕಡೆಗೆ ಹೊಗುವ ಮಂಗಳ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಯುವಕ ಮೃತಪಟ್ಟಿದ್ದಾನೆ.
ಆಗಸ್ಟ್ 31ರಂದು ಸತೀಶ(26) ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದವನು ರಾತ್ರಿ 9:30 ಗಂಟೆಯಾದರೂ ಮನೆಗೆ ಬಾರದೆ ಇದ್ದು ರಾತ್ರಿ ರೈಲ್ವೆ ಹಳಿ ಕ್ರಾಸ್ ಮಾಡುವಾಗ ಅಕಸ್ಮಿಕವಾಗಿ ಕಾರಾವಾರ ಮಂಗಳೂರು ಕಡೆಗೆ ಹೊಗುವ ಮಂಗಳ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಬೈಂದೂರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2024 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.