ಉಡುಪಿ | ಸ್ಕೂಟರ್’ಗೆ ಪಿಕ್’ಆಪ್ ಡಿಕ್ಕಿ – ಸವಾರ ಮೃತ್ಯು

ಸಾಂದರ್ಭಿಕ ಚಿತ್ರ

ಉಡುಪಿ: ಸ್ಕೂಟರ್’ಗೆ ಬೊಲೆರೋ ಪಿಕ್’ಆಪ್ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಸವಾರ ಮೃತಪಟ್ಟಿದ್ದಾರೆ.

ಮೃತರನ್ನು ರಾಕೇಶ್ (27) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ” ರಾತ್ರಿ ಕಟಪಾಡಿಯಿಂದ ವಾಪಾಸು ಹೊರಟು  ಕಿನ್ನಿಮುಲ್ಕಿ ಯಿಂದ ಸ್ವಲ್ಪ ಮುಂದೆ ಅಂಬಲಪಾಡಿ ಗ್ರಾಮದ ನಿಸರ್ಗ ಫ್ರೆಶ್ ಆಯಿಲ್ ಎದುರು ಬರುವಾಗ ಕಟಪಾಡಿ  ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ನೇ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರುವಾಗ ಬೊಲೆರೋ ಪಿಕಪ್ ವಾಹನದ ಚಾಲಕ ಹಿಂದಿನಿಂದ ಡಿಕ್ಕಿ ಹೊಡೆದು ಸವಾರನ ಮೇಲೆ ವಾಹನ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು”.

ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದನ್ನು ಧೃಡೀಕರಿಸಿದ್ದಾರೆ.

ಈ ಬಗ್ಗೆ ಉಡುಪಿ  ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2024 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

Latest Indian news

Popular Stories