ವಿರಾಜಪೇಟೆ ಅಂಬಟ್ಟಿ ಬಳಿ ಬಸ್ಸು ಹಾಗೂ ಗೂಡ್ಸ್ ವಾಹನ ನಡುವೆ ಡಿಕ್ಕಿ ಮೂವರಿಗೆ ಗಾಯ ಆಸ್ಪತ್ರೆಗೆ ದಾಖಲು

ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಅಂಬಟ್ಟಿ ಬಳಿಯ ಕಣ್ಣನ್ ಟಯರ್ ಸಮೀಪ ಮಹೇಂದ್ರ ಮ್ಯಾಕ್ಸಿಮ ಗೂಡ್ಸ್ ವಾಹನ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಉಂಟಾಗಿದೆ.

IMG 20240213 WA0009 Accident News, Kodagu

ವಿರಾಜಪೇಟೆಯಿಂದ ಬರುತ್ತಿದ್ದ ಮ್ಯಾಕ್ಸಿಮಾ ಗೂಡ್ಸ್ ವಾಹನ ಬಲ ಬದಿಗೆ ತಿರುವು ತೆಗೆದುಕೊಂಡಾಗ ಹಿಂಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಗೂಡ್ಸ್ ವಾಹನದಲ್ಲಿ ಪ್ರಯಾಣಿಸುತಿದ್ದ ಮೂವರಿಗೆ ಗಾಯಗಳು ಉಂಟಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಓರ್ವನಿಗೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿದೆ ಎಂದು ಹೇಳಲಾಗಿದೆ.ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಇಂದು ಬೆಳಿಗ್ಗೆ 8:30 ಗಂಟೆಗೆ ಈ ಘಟನೆ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Latest Indian news

Popular Stories