ರಾಹುಲ್‌ ಗಾಂಧಿ ಕಪ್ಪ ಕಾಣಿಕೆ ಕೊಡಲು ಹಾಲಿನ ದರ ಏರಿಕೆ : ಆರ್.‌ ಅಶೋಕ್‌ ಆರೋಪ

ಬೆಳಗಾವಿ : ರಾಹುಲ್‌ ಗಾಂಧಿ ಕಪ್ಪ ಕಾಣಿಕೆ ಕೊಡಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಲಿನ ದರ ಏರಿಕೆ ಮಾಡಲಾಗಿದೆ ಎಂದು ವಿರೋಧ ವಿಪಕ್ಷದ ನಾಯಕ ಆರ್.‌ ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸೋಲಿನ ಕೋಪಕ್ಕೆ ಬೆಲೆರ ಏರಿಕೆ ಮಾಡಲಾಗಿದೆ.

ಕಾಫಿ, ಟೀ ಕುಡಿಯಲು ಸಿದ್ದರಾಮಯ್ಯ ಸರ್ಕಾರ ಕಲ್ಲು ಹಾಕಿದೆ. ರಾಹುಲ್‌ ಗಾಂಧಿಗೆ ಕಪ್ಪ ಕಾಣಿಗೆ ನೀಡಲು ಬೆಲೆ ಏರಿಕೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಬಡವರನ್ನು ಸರ್ವನಾಶ ಮಾಡಲು ಬೆಲೆ ಏರಿಕೆ ಮಾಡುತಿತದೆ. ಬಸ್‌ ಟಿಕೆಟ್‌ ದರ ಏರಿಕೆಗೂ ಸಿದ್ಧತೆ ಮಾಡಲಾಗಿದೆ. ಅಧಿಕಾರಿಗಳಿಂದ ಈಗಾಗಲೇ ವರದಿ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

Latest Indian news

Popular Stories