ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಬೆಳಗಾವಿ: ಇಲ್ಲಿಯ ತಹಶೀಲ್ದಾರ ಕಚೇರಿಯ ಕೊಠಡಿಯಲ್ಲಿಯೇ ಎಸ್ ಡಿಎ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ (ನ.5) ನಡೆದಿದೆ.

ದ್ವಿತೀಯ ದರ್ಜೆ ಗುಮಾಸ್ತ ರುದ್ರಣ್ಣ ಯಡವನ್ನವರ ಎಂಬ ಸಿಬ್ಬಂದಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ತಹಶೀಲ್ದಾರರು ಕುಳಿತುಕೊಳ್ಳುವ ಕೋರ್ಟ್ ಕೇಸು ಪಡೆಯುವ ಸ್ಥಳದಲ್ಲಿಯ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬರುತ್ತಿದ್ದಂತೆ ವಿಚಾರ ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ (ತಹಶೀಲ್ದಾರರ ಟೇಬಲ್ ಬಳಿ) ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories