ವಿಮ್ಸ್ನ ಪ್ರಸೂತಿ ಮತ್ತು ಸ್ತಿçÃರೋಗ ವಿಭಾಗದ ವೈದ್ಯರ ತಂಡ ಸಾಧನೆ ಬೃಹತ್ ಗಾತ್ರದ ಅಂಡಾಶಯದ ಗಡ್ಡೆಯ ಯಶಸ್ವಿ ಶಸ್ತçಚಿಕಿತ್ಸೆ

ಬಳ್ಳಾರಿ,ಜು.31(ಕರ್ನಾಟಕ ವಾರ್ತೆ): ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ಹೊಟ್ಟೆಯಿಂದ ಬೃಹದಾಕಾರದ 20 ಕೆ.ಜಿ ತೂಕದ ಗಡ್ಡೆಯನ್ನು ಹೊರತೆಗೆಯುವ ಮೂಲಕ ಅತಿ ಕ್ಲಿಷ್ಟಕರ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಶಸ್ತçಚಿಕಿತ್ಸೆಗೆ ಅರವಳಿಕೆ ವಿಭಾಗದ ಡಾ.ಬಾಲಭಾಸ್ಕರ್ ಅವರು ತಂಡದ ನೇತೃತ್ವದಲ್ಲಿ ವಿಮ್ಸ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಬಿ-ಘಟಕದ ಮುಖ್ಯಸ್ಥರಾದ ಡಾ.ವಿಜಯ ಹರಸೂರು, ಡಾ.ವಾರಿಜ ರೆಡ್ಡಿ, ಡಾ.ಶಿವಕುಮಾರ್ ಹೆಚ್.ಸಿ, ಡಾ.ಸ್ಪೂರ್ತಿ ಪಿ.ರೆಡ್ಡಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಚಂದಪ್ಪಗೌಡ ಪಾಟೀಲ್, ಡಾ.ನಂದಿನಿ, ಡಾ.ಸಚಿನ್ ಮತ್ತು ಡಾ.ಅಯೇಶಾ ಅವರೊಂದಿಗೆ ಶುಕ್ರವಾರ ಶಸ್ತçಚಿಕಿತ್ಸೆ ನೆರವೇರಿಸಿದ್ದಾರೆ.
40 ವರ್ಷದ ದ್ಯಾವಮ್ಮ ಎನ್ನುವ ಮಹಿಳೆಯು ಜು.28ರಂದು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಯು ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಗೆ ಬರುವ ದಾರಿಯಲ್ಲಿಯೇ ಹೆರಿಗೆಯಾಗಿತ್ತು. ಅಲ್ಲಿನ ವೈದ್ಯರು ಬಾಣಂತಿಯ ಹೊಟ್ಟೆಯಲ್ಲಿ ಬೃಹದಾಕಾರದ ಗಡ್ಡೆ ಇರುವ ಕಾರಣಕ್ಕೆ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು.
ವಿಮ್ಸ್ನಲ್ಲಿ ಮಹಿಳೆಗೆ ಪರೀಕ್ಷೆ ಮಾಡಿದ ನಂತರ ಬೃಹದಾಕಾರದ ಗಡ್ಡೆ ಇರುವುದು ಕಂಡು ಬಂದಿದೆ. ಗಡ್ಡೆಯು 304050 ಸೆ.ಮೀ ಇದ್ದು, 20 ಕೆ.ಜಿ.ತೂಕ ಹೊಂದಿದೆ. ಅದರಲ್ಲಿ 15ರಿಂದ 20 ಲೀಟರ್‌ನಷ್ಟು ದ್ರವ ಕಂಡುಬAದಿದ್ದು ಅದನ್ನು ಸೂಕ್ಷö್ಮವಾಗಿ ಹೊರತೆಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ. ಶಸ್ತçಚಿಕಿತ್ಸೆಯ ನಂತರ ಮಹಿಳೆಯು ಆರೋಗ್ಯವಾಗಿದ್ದಾರೆ. ಈ ತರಹದ ಗಡ್ಡೆ ಅತಿ ವಿರಳವಾಗಿರುತ್ತದೆ. ಇಂತಹ ಶಸ್ತçಚಿಕಿತ್ಸೆ ತುಂಬಾ ಕ್ಲಿಷ್ಟಕರ ಮತ್ತು ಕಠಿಣವಾಗಿರುತ್ತದೆ. ಇಂತ ತುಂಬಾ ಕ್ಲಿಷ್ಟಕರ ಚಿಕಿತ್ಸೆಯನ್ನು ವಿಮ್ಸ್ನ ವೈದ್ಯರ ತಂಡ ಯಶಸ್ವಿಯಾಗಿ ನೆರವೇರಿಸಿದೆ.

Latest Indian news

Popular Stories