ಬೆಂಗಳೂರಿನ ಕುಂಬಾರಪೇಟೆಯಲ್ಲಿ ‘ಡಬ್ಬಲ್ ಮರ್ಡರ್’: ಬೆಚ್ಚಿಬಿದ್ದ ‘ಸಿಲಿಕಾನ್ ಸಿಟಿ’ ಜನತೆ

ಬೆಂಗಳೂರು: ನಗರದ ಕುಂಬಾರಪೇಟೆ ಹರಿ ಮಾರ್ಕೆಟಿಂಗ್ ಒಳಗೆ ಡಬ್ಬಲ್ ಮರ್ಡರ್ ಮಾಡಿರೋ ಘಟನೆ ನಡೆದಿದೆ.

ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹರಿ ಮಾರ್ಕೆಟಿಂಗ್ ಒಳಗಡೆ ಸುರೇಶ್ (55) ಹಾಗೂ ಮಹೇಂದ್ರ (68) ಎಂಬ ಇಬ್ಬರನ್ನು ಹತ್ಯೆಗೈಯ್ಯಲಾಗಿದೆ.

ಆಸ್ತಿಯ ವಿಚಾರಕ್ಕಾಗಿ ಈ ಮರ್ಡರ್ ನಡೆಸಿದೆ ಎನ್ನಲಾಗುತ್ತಿದೆ. ಸುರೇಶ್, ಮಹೇಂದ್ರ ಅವರ ಸಂಬಂಧಿ ಭದ್ರ ಎಂಬಾತನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ. ಅಲ್ಲದೇ ಹತ್ಯೆಯ ಬಳಿಕ ಪೊಲೀಸರಿಗೆ ಶರಣಾಗಿರೋದಾಗಿ ತಿಳಿದು ಬಂದಿದೆ.

ಸದ್ಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರೋ ಹಲಸೂರು ಗೇಟ್ ಠಾಣೆಯ ಪೊಲೀಸರು, ಡಿಸಿಪಿ ಶೇಖರ್, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಬಂಧಿತ ಆರೋಪಿ ಭದ್ರ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

Latest Indian news

Popular Stories