ಬೆಂಗಳೂರಿನ ‘ವಿಜಯ ಕಾಲೇಜಿ’ನಲ್ಲಿ ಅಪರಿಚಿತನಿಂದ ಪುಂಡಾಟ: ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿ ದಾಂಧಲೆ

ಬೆಂಗಳೂರು: : ನಗರದ ವಿಜಯ ಕಾಲೇಜಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿ, ವಿಚಿತ್ರವಾಗಿ ನಡೆದುಕೊಂಡಿರೋ ಘಟನೆ ನಡೆದಿದೆ.

ಅಪರಿಚಿತ ವ್ಯಕ್ತಿ ಕಾಲೇಜಿನ ಒಳಗೆ ನುಗ್ಗಿ ವಿಚಿತ್ರವಾಗಿ ನಡೆದುಕೊಂಡಿದ್ದಲ್ಲದೇ, ದಾಂಧಲೆ ನಡೆಸಿದ ಕಾರಣ ಕೆಲ ಕಾಲ ಸ್ಥಳದಲ್ಲಿ ಆತಂಕ ಕೂಡ ಸೃಷ್ಠಿಯಾಗಿರೋದಾಗಿ ಹೇಳಲಾಗುತ್ತಿದೆ.

ಈ ವೇಳೆ ಆಡಳಿತ ಮಂಡಳಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳುತ್ತಿದ್ದಂತೇ, ಸ್ಥಳದಿಂದ ಅಪರಿಚಿತ ವ್ಯಕ್ತಿ ಕಾಲ್ ಕಿತ್ತಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಗೆ ವಿಜಯ ಕಾಲೇಜು ಆಡಳಿತ ಮಂಡಳಿಯಿಂದ ದೂರು ನೀಡಲಾಗಿದೆ.

ಸ್ಥಳಕ್ಕೆ ಆಗಮಿಸಿದಂತ ಜಯನಗರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಿ, ಬಂಧನಕ್ಕೆ ಬಲೆ ಬೀಸಿದ್ದಾರೆ.

Latest Indian news

Popular Stories