ಬೆಂಗಳೂರು: ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿ ಧಾರವಾಡ ಮೂಲದ ವಿದ್ಯಾರ್ಥಿನಿ ಸಂಗೀತಾ ಎಂದು ತಿಳಿದುಬಂದಿದೆ.
ಸಂಗೀತಾ ಪ್ರಥಮ ಪಿಯು ತಂಡದಲ್ಲಿ ಆಡುತ್ತಿದ್ದರು. ಅತ್ತಿಬೆಲೆಯ ಸೈಂಟ್ ಫಿಲೋಮಿನಾ ಶಾಲೆಯಲ್ಲಿ ಕಬಡ್ಡಿ ಆಡುತ್ತಿರುವಾಗಲೇ ಕುಸಿದುಬಿದ್ದ ಸಂಗೀತಾಳನ್ನು ತಕ್ಷಣವೇ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಂಗೀತಾ ಸಾವನ್ನಪ್ಪಿದ್ದಾರೆ.