ಮಳೆಯಿಂದ ಎಕ್ಸ್‌ಪ್ರೆಸ್‌ ರಸ್ತೆ ಜಲಾವೃತ: ವಾಹನ ಸವಾರರ ಪರದಾಟ

ರಾಮನಗರ: ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃತಗೊಂಡಿತ್ತು. ಇದರಿಂದ ವಾಹನ ಸವಾರರು ಪರದಾಡಿದರು.

ಬೇಸಿಗೆಯ ಮೊದಲ ಮಳೆಯೇ ಕಿರಿಕಿರಿ ಸೃಷ್ಟಿಸಿದ್ದು, ರಾಮನಗರ ಸಮೀಪದ ಸಂಘಬಸವನದೊಡ್ಡಿ ಬಳಿಯ ಹೆದ್ದಾರಿ ಜಲಾವೃತವಾಗಿದೆ.

ಶುಕ್ರವಾರ ಸುರಿದ ಮಳೆಗೆ ರಸ್ತೆಯಲ್ಲಿ ಮಳೆ ನೀರು ನಿಂತು, ವಾಹನ ಸವಾರರು ಪರದಾಡುವಂತಾಯಿತು. ಕೆಲವು ವಾಹನಗಳು ಅಲ್ಲಿಯೇ ಕೆಟ್ಟು ನಿಂತವು. ಮಳೆನೀರು ಸರಾಗವಾಗಿ ಹರಿದುಹೋಗದೆ ರಸ್ತೆಯಲ್ಲಿ ನಿಂತುಹೋದುದರಿಂದ ಈ ಅವಾಂತರ ಸೃಷ್ಟಿಯಾಗಿದೆ.

Latest Indian news

Popular Stories