ಶಿವಮೊಗ್ಗ: ಹಿಂದುತ್ವವಾದಿಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೋಸ ಮಾಡಿದ್ದಾರೆ. ಬಿಎಸ್‌ವೈ ಹಿಡಿತದಲ್ಲಿ ಪಕ್ಷ ಸಿಲುಕಿ ಒದ್ದಾಡುತ್ತಿದೆ. ನನ್ನ ನಿರ್ಧಾರ ವಾಪಸ್ ಪಡೆಯಲ್ಲ. ಬಂಡಾಯ ಸ್ಪರ್ಧೆ ಎಂದ ಮೇಲೆ ಹಿಂದೆ ಸರಿಯಲ್ಲ. ಪಕ್ಷೇತರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್‌ಸಿ ರವಿಕುಮಾರ್, ಅರುಣ್ ನನ್ನ ಮನೆಗೆ ಬಂದಿದ್ರು. ಯಾವ ಕಾರಣಕ್ಕೆ ನನ್ನ ಸ್ಪರ್ಧೆ ಎಂದು ಅವರಿಗೆ ಮಾಹಿತಿ ನೀಡಿದ್ದೇನೆ. ನನ್ನ ಮಗನಿಗೆ ಟಿಕೆಟ್ ಸಿಗದಿರುವುದು ಒಂದೇ ಕಾರಣ ಅಲ್ಲ. ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಮೋಸ ಮಾಡಿದ್ದಾರೆ ಎಂದು ಹೇಳಿದರು.ಯಡಿಯೂರಪ್ಪ ಹಿಡಿತದಲ್ಲಿ ಬಿಜೆಪಿ ಪಕ್ಷ ಸಿಲುಕಿದೆ. ಲಿಂಗಾಯತ ನಾಯಕ ಯತ್ನಾಳ್, ಸಿಟಿ ರವಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಏಕೆ ಮಾಡಲಿಲ್ಲ. ಎಂಪಿ ಸ್ಥಾನಕ್ಕೆ ಸೀಟಿ ರವಿಗೆ ಟಿಕೆಟ್ ಕೊಡಬಹುದಾಗಿತ್ತು. ಬಿಎಸ್‌ವೈಗೆ ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು ಬೇಡ ಎಂದು ಕಿಡಿಕಾರಿದರು.
ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಕೇಂದ್ರ ತಂಡದ ಬಳಿಯೂ ಇದನ್ನೇ ಹೇಳಿದ್ದು, ನಾನು ಏಕೆ ಸ್ಪರ್ಧೆ ಮಾಡುತ್ತಿದ್ದೇನೆ ಅಂತ ತಿಳಿಸಿದ್ದೇನೆ. ನನ್ನ ಮಗನಿಗೆ ಎಂಎಲ್ ಸಿ ಸ್ಥಾನ ಕೊಡುತ್ತೇವೆ ಅಂತ ಆಫರ್ ನೀಡಿದರು.ಪಕ್ಷ ಶುದ್ದಿ ಆಗಬೇಕು ಅದನ್ನು ಅವರಿಗೆ ಹೇಳಿದ್ದೇನೆ.ರಾಧಾ ಮೋಹನ್ ಅಗರ್ವಾಲ್ ಹಾಗೂ ರಾಜೇಶ್ ಗೆ ಮಾಹಿತಿ ನೀಡಿದ್ದೇನೆ. ಯಾವ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ತಿಳಿಸಿದ್ದಾರೆ.