ಬೆಂಗಳೂರಿನ ಒಂದೇ ಠಾಣೆಯಲ್ಲಿ 1.02 ಲಕ್ಷ ಸಂಚಾರ ನಿಮಯ ಉಲ್ಲಂಘನೆ ಕೇಸ್

ಬೆಂಗಳೂರು ಮೇ 28: ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ನಗರದಲ್ಲಿ ಕೃತಕ ಬುದ್ದಿಮತ್ತೆ(ಎ.ಐ) ಸಂಚಾರ ನಿರ್ವಹಣಾ ವ್ಯವಸ್ಥೆಯಡಿ (ಐಟಿಎಂಎಸ್) ಆಧುನಿಕ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಕ್ಲಿಕ್ಕಿಸುವ ಫೋಟೋಗಳನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಾರೆ.

ಹೀಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘಟನೆಗೆ ಸಂಬಂಧಪಟ್ಟಂತೆ 1.02 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದೊಂದೇ ಠಾಣೆಯ ವ್ಯಾಪ್ತಿಯಲ್ಲಿ 2024ರ ಜನವರಿಯಿಂದ ಮೇ 27ರವರೆಗೆ 1.02 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಹೆಚ್ಚಳ ಇದಕ್ಕೆ ಕಾರಣ. ಇವುಗಳ ಜೊತೆಗೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಮಾಣಗಳು ಹೆಚ್ಚಾಗುತ್ತಿವೆ. ಅಲ್ಲದೆ ಅಪಘಾತಗಳು, ಹೆಲ್ಮೆಟ್ ಧರಿಸದೇ ಸವಾರಿ, ಅತೀ ವೇಗದಲ್ಲಿ ಚಾಲನೆ ಹೀಗೆ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ಹೇಳುತ್ತಾರೆ.

ಪೊಲೀಸ್ ಸಿಬ್ಬಂದಿಯ ಕೊರತೆಯಿಂದಾಗಿ ಪ್ರತಿಯೊಂದು ವಾಹನಗಳ ಮೇಲೆ ಕಣ್ಣೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೂತನ ತಂತ್ರಜ್ಞಾನದ ಕ್ಯಾಮೆರಾಗಳಿಂದ ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆ ಹಚ್ಚುವುದು ಸುಲಭವಾಗಿದೆ. ವಾಹನಗಳ ನೋಂದಣಿ ಸಂಖ್ಯೆ ಹಾಗೂ ಗುರುತು ಸಹ ಪತ್ತೆ ಹಚ್ಚುದುವು ಸುಲಭವಾಗಿದೆ. ಇದನ್ನು ಆಧರಿಸಿ ವಾಹನಗಳ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ದಂಡ ಬಾಕಿ ಇರುವ ಜನರ ಮೊಬೈಲ್ ಹಾಗೂ ಮನೆಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಟ್ರಾಫಿಕ್ ಪೊಲೀಸರು ಹ್ಯಾಂಡ್‌ಹೆಲ್ಡ್ ಫೀಲ್ಡ್ ಟ್ರಾಫಿಕ್ ಉಲ್ಲಂಘನೆ ವರದಿ (ಎಫ್‌ಟಿವಿಆರ್) ಸಾಧನಗಳನ್ನು ಬಳಸುತ್ತಿದ್ದಾರೆ, ಇದು ಇತರ ಟ್ರಾಫಿಕ್ ಉಲ್ಲಂಘನೆಗಳ ನಡುವೆ ವೇಗವಾಗಿ, ಫುಟ್‌ಪಾತ್ ಪಾರ್ಕಿಂಗ್ ಮತ್ತು ರಾಂಗ್ ಸೈಡ್ ಡ್ರೈವಿಂಗ್ ಅನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ

Latest Indian news

Popular Stories