ನಿಂತಿದ್ದ ಲಾರಿಗೆ ಪಿಕಪ್‌ ವಾಹನ ಡಿಕ್ಕಿ: ಅಪ್ರಾಪ್ತ ಕಾರ್ಮಿಕರಿಗೆ ಗಂಭೀರ ಗಾಯ

40ಕ್ಕೂ ಹೆಚ್ಚು ಮಹಿಳೆಯರನ್ನು ತುಂಬಿಕೊಂಡು ಹೋಗುತ್ತಿದ್ದ ಪಿಕಪ್ ವಾಹನವೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯರ ಕಾಲು ಮುರಿದಿವೆ

40ಕ್ಕೂ ಹೆಚ್ಚು ಮಹಿಳೆಯರು ಪಿಕಪ್‌ ವಾಹನದ ಮೇಲೆ, ಒಳಗೆ ಕುಳಿತುಕೊಂಡು ಮೆಣಸಿನಕಾಯಿ ಬಿಡಿಸಲು ಯಾಳಗಿ ಗ್ರಾಮಕ್ಕೆ ತೆರಳುತ್ತಿದ್ದರು.ಈ ವೇಳೆ ಉದ್ದದ ಕಬ್ಬಿಣದ ಪೈಪ್‌ಗಳನ್ನು ಹೇರಿಕೊಂಡು ನಿಂತಿದ್ದ ಲಾರಿಗೆ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ. ಪಿಕಪ್‌ ವಾಹನದ ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಪಿಕಪ್ ವಾಹನ ವೀರಘಟ್ಟ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಘಟನೆ ನಡೆದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ದೇವದುರ್ಗ ತಾಲೂಕಿನ ಬಂಡೆಬಾವಿ ಗ್ರಾಮದ ತಿಮ್ಮಮ್ಮ(17) ಅವರ ಎಡಗಾಲಿನ ಪಾದದ ಎಲುಬುಗಳು ಕಟ್ಟಾಗಿವೆ. ಸುರಪುರ ತಾಲ್ಲೂಕಿನ ಬಂಡೊಳ್ಳಿ ಗ್ರಾಮದ ಅಂಬಿಕಾ ಮೇಟಿ (16) ಅವರ ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಇಬ್ಬರಿಗೂ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Latest Indian news

Popular Stories