ಬೆಂಗಳೂರು: ನಗರದಲ್ಲಿ ಬೈಕ್-ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಚಿಕ್ಕಜಾಲ ಮೇಲ್ಸೇತುವೆ ಬಳಿಯ ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಚಿಕ್ಕಜಾಲ ಮೇಲ್ಸೇತುವೆಯ ಬಳಿಯಲ್ಲಿ ತಡರಾತ್ರಿ 1.30ರ ವೇಳೆಯಲ್ಲಿ ಮೂವರು ಸ್ನೇಹಿತರು ಬೈಕ್ ನಲ್ಲಿ ತೆರಳುತ್ತಿದ್ದರು.
ಈ ವೇಳೆಯಲ್ಲಿ ಹಿಂಬದಿಯಿಂದ ಬಂದಂತ ಲಾರಿಯೊಂದು ಬೈಕ್ ಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಧಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಮೂವರು ಸ್ನೇಹಿತರು ಸಾವನ್ನಪ್ಪಿದ್ದಾರೆ.
ಮೃತ ಪಟ್ಟವರನ್ನು ಬಿಎಸ್ಸಿ ಓದುತ್ತಿದ್ದಂತ ವಿದ್ಯಾರ್ಥಿಗಳಾದಂತ ಸುಚಿತ್ (22), ಹರ್ಷವರ್ಧನ್ (21) ಹಾಗೂ ರೋಹಿತ್ (21) ಎಂಬುದಾಗಿ ಗುರುತಿಸಲಾಗಿದೆ. ಇವರೆಲ್ಲರು ಜಿಕೆವಿಕೆಯಲ್ಲಿ ತೋಟಗಾರಿಕೆ ಪದವಿಯ ಅಂತಿಮ ವರ್ಷದ ಬಿಎಸ್ಸಿ ಅಗ್ರಿ ಓದುತ್ತಿದ್ದರು.
ತಮ್ಮ ಸ್ನೇಹಿತರೊಬ್ಬರ ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ವಾಪಾಸ್ ಆಗುತ್ತಿದ್ದಂತ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ.