ಜೈಲಿನಿಂದಲೇ ನಿರ್ಮಾಪಕರಿಗೆ ನಟ ದರ್ಶನ್ ಕರೆ, ಜಾಮೀನು ಕೊಡಿಸುವಂತೆ ಒತ್ತಾಯ

ಬೆಂಗಳೂರು: ಜೈಲಿನಿಂದಲೇ ನಿರ್ಮಾಪಕರಿಗೆ, ನಿರ್ದೇಶಕರಿಗೆ ನಟ ದರ್ಶನ್ ಕರೆ ಮಾಡುತ್ತಿದ್ದು, ಜಾಮೀನಿನ ಮೇಲೆ ಹೊರತರುವಂತೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರದ ಬೂತ್ ಫೋನ್ ನಿಂದ ನಟ ದರ್ಶನ್ ಕರೆ ಮಾಡುತ್ತಿದ್ದು, ಜಾಮೀನಿನ ಮೇಲೆ ಹೊರತರುವಂತೆ ನಿರ್ಮಾಪಕ, ನಿರ್ದೇಶಕರಿಗೆ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ

ಅಲ್ಲದೇ ಅಕ್ಕಪಕ್ಕದ ಕೈದಿಗಳ ಲಿಮಿಟ್ ಕೂಡ ಬಳಕೆ ಮಾಡಿಕೊಳ್ಳುತ್ತಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ್ಲೇ ನಿರ್ಮಾಪಕರಿಗೆ ಫೋನ್ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ, ಜೊತೆಗೆ ಸ್ಥಗಿತಗೊಂಡ ಕೆಲವು ಸಿನಿಮಾಗಳ ಬಗ್ಗೆ ಕೂಡ ನಿರ್ದೇಶಕರು, ನಿರ್ಮಾಪಕ ಜೊತೆ ಮಾತುಕತೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ವಾರಕ್ಕೆ 3 ಬಾರಿ ಫೋನ್ ಕರೆ ಮಾಡಲು ದರ್ಶನ್ ಗೆ ಜೈಲಿನ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಇದುವರೆಗೆ ಕುಟುಂಬದವರ ಜೊತೆ ಒಂದು ಬಾರಿಯೂ ಕರೆ ಮಾಡಿ ಮಾತನಾಡದ ನಟ ದರ್ಶನ್ ರಾತ್ರಿಯಾಗುತ್ತಿದ್ದಂತೆ ಕೆಲವು ನಿರ್ಮಾಪಕ-ನಿರ್ದೇಶಕರಿಗೆ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಪವಿತ್ರಗೌಡ ಮತ್ತು ಆತನ ಸಹಚರರು ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.

Latest Indian news

Popular Stories