ನಟ ದರ್ಶನ್‌ ಬಳಿಯಿದ್ದ 2 ಪಿಸ್ತೂಲ್‌ ಪೊಲೀಸರ ವಶಕ್ಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಹಾಗೂ ಪ್ರದೋಷ್‌ ಬಳಿ ಇದ್ದ ಎರಡು ಪಿಸ್ತೂಲ್‌ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಮ್ಮ ಬಂದೂಕುಗಳನ್ನು ಪೊಲೀಸರ ಬಳಿ ಠೇವಣಿ ಇಡುವ ನಿಯಮ ಪಾಲಿಸಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪರವಾನಗಿ ಪಡೆದ ಪಿಸ್ತೂಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಟ ದರ್ಶನ್ ಹಾಗೂ ಪ್ರದೋಶ್ ಬಳಿ ಇರುವ ಪಿಸ್ತೂಲ್ ವಶಕ್ಕೆ ಪಡೆಯುವಂತೆ ತನಿಖಾಧಿಕಾರಿಗಳು ಆರ್.ಆರ್.ನಗರದ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಬೆನ್ನಲ್ಲೇ ನಟ ದರ್ಶನ್ ಬಳಿಯಿದ್ದ ಎರಡು ಪಿಸ್ತೂಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

Latest Indian news

Popular Stories