ನಟ ‘ಧ್ರುವ ಸರ್ಜಾ’ ಇದ್ದ ವಿಮಾನ ‘ಕ್ರಾಶ್’ : ಪೈಲೇಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಶ್ರೀನಗರ: ಧ್ರುವ ಸರ್ಜಾ ನಟನೆಯ ಮಾರ್ಟೀನ್ ಚಿತ್ರತಂಡ ಪ್ರಯಾಣಿಸುತ್ತಿದ್ದ ಫ್ಲೈಟ್ ಕ್ರ್ಯಾಶ್ ಆಗಬೇಕಿತ್ತು. ಆದರೆ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ ಎನ್ನಲಾಗುತ್ತಿದೆ.

ಮಾರ್ಟಿನ್ ಚಿತ್ರದ ಹಾಡಿನ ಶೂಟಿಂಗ್ಗಾಗಿ ಚಿತ್ರತಂಡವು ಶ್ರೀನಗರಕ್ಕೆ ತೆರಳಿತ್ತು. ಹಾಡಿನ ಚಿತ್ರೀಕರಣ ಮುಗಿಸಿಕೊಂಡು ಶ್ರೀನಗರದಿಂದ ಚಿತ್ರತಂಡ ದೆಹಲಿಗೆ ಬರುತ್ತಿತ್ತು. ನಿನ್ನೆ ಹಾಡಿನ ಚಿತ್ರೀಕರಣ ಮುಗಿಸಿರುವ ಸರ್ಜಾ ವಿಮಾನ ಮರಳುತ್ತಿತ್ತು ಈ ವೇಳೆ ವಿಮಾನ ಕ್ರ್ಯಾಶ್ ಆಗುವ ಸಂಭವವಿತ್ತು ಮಾಟಿ ಚಿತ್ರತಂಡ ಬಚಾವ್ ಆಗಿದೆ.

ಇಂಡಿಗೋ ಫ್ಲೈಟ್ ನಲ್ಲಿ ಮಾರ್ಟಿನ್ ಚಿತ್ರತಂಡ ತೆರಳುತ್ತಿತ್ತು. ಈ ವೇಳೆ ಕೂದಲೆಳೆ ಅಂತರದಲ್ಲಿ ಮಾರ್ಟೀನ್ ಚಿತ್ರ ತಂಡ ಪಾರಾಗಿದೆ ಎಂದು ಹೇಳಲಾಗಿದೆ.ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ವೇಳೆ ಬಚಾವಾಗಿದ್ದಾರೆ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ನಂತರ ವಿಮಾನದಲ್ಲಿ ಧ್ರುವ ಸರ್ಜಾ ಮಾತನಾಡಿದ್ದು ಇದೊಂದು ಕೆಟ್ಟ ಅನುಭವ ಆಗಿದ್ದು. ನಮ್ಮ ಚಿತ್ರತಂಡಕ್ಕೆ ಯಾವುದೇ ರೀತಿಯಾದ ಅಪಾಯವಾಗಿಲ್ಲ ಎಲ್ಲರೂ ಸುರಕ್ಷಿತವಾಗಿದ್ದೇವೆ. ಜೈ ಆಂಜನೇಯ ಜೈ ಶ್ರೀ ರಾಮ್ ಎಂದು ತಿಳಿಸಿದ್ದಾರೆ.

Latest Indian news

Popular Stories