ಆಸ್ಪತ್ರೆಯಿಂದ ನಟ ʻವಿನೋದ್‌ ರಾಜ್‌ʼ ಡಿಸ್ಚಾರ್ಜ್‌

ಬೆಂಗಳೂರು: ಹೃದಯಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ವಿನೋದ್‌ ರಾಜ್‌ ಅವರು ಇಂದು ಆಸ್ಪತ್ರೆಯಿಂದ ಡಿಸ್ಜಾರ್ಜ್‌ ಆಗಿದ್ದಾರೆ.

ಹೃದಯಸಂಬಂಧಿ ಹರ್ನಿಯಾ ತೊಂದರೆಯಿಂದ ಬಳಲುತ್ತಿದ್ದ ವಿನೋದ್‌ ರಾಜ್‌ ಅವರು ಜೂನ್‌ 12 ರಂದು ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್‌ ಮಾಡಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ದಿನಗಳ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

Latest Indian news

Popular Stories