ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಇದೀಗ ಶ್ರೀಶಕ್ತಿ ಸ್ವ ಸಹಾಯ ಸಂಘದ ಸುಮಾರು 35 ಮಹಿಳೆಯರು ಆಗಮಿಸಿ ದರ್ಶನ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಶ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ದೂರು ದಾಖಲಾಗಿದ್ದು ನಿರ್ಮಾಪಕ ಉಮಾಪತಿ ಕುರಿತು ಅಸಂಬದ್ಧ ಪದ ಬಳಕೆ ಮಾಡಿದ್ದಲ್ಲದೆ ಮಹಿಳೆಯರ ಬಗ್ಗೆಯೂ ಕೇವಲವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದರ್ಶನ್ ಅವರು ಒಬ್ಬ ದೊಡ್ಡ ಸೆಲೆಬ್ರಿಟಿ ಅವರನ್ನು ನೋಡಿ ಕಲಿಯಬೇಕಾದವರು ತುಂಬಾ ಜನ ಇದ್ದಾರೆ.ಅವರೊಬ್ಬ ಸೆಲೆಬ್ರಿಟಿಯಾಗಿ ಈ ರೀತಿ ಮಾತನಾಡುವುದು ನನಗೆ ತುಂಬಾ ನೋವಾಗಿದೆ.ದಯವಿಟ್ಟು ದರ್ಶನ್ ಅವರು ಇನ್ನು ಮೇಲೆ ತಿದ್ದುಕೊಳ್ಳಿ ಮುಂದೆ ಯಾವ ಸಭೆ ಸಮಾರಂಭಗಳಲ್ಲಿ ಆದರೂ ಅವಳು ಇವಳು ಎಂದು ಮಹಿಳೆಯರ ಕುರಿತು ಕೀಳಾಗಿ ಮಾತನಾಡಬೇಡಿ.
ನಿಮ್ಮನ್ನು ಹೆತ್ತಿದ್ದೂ ಕೂಡ ಓಬ್ಬರು ತಾಯಿ ನಿಮ್ಮ ಅಕ್ಕ ಕೂಡ ಹೆಣ್ಣೆ ಆ ಹೆಣ್ಣನ್ನು ಮರೆತು ಪ್ರತಿ ಸಭೆಯಲ್ಲೂ ಹೆಣ್ಣನ್ನು ಬರುತ್ತಾಳೆ ಹೋಗ್ತಾಳೆ ಎನ್ನುವ ಮಾತಾಡುವ ಮಾತು ಸರಿಯಿಲ್ಲ. ದಯವಿಟ್ಟು ತಿದ್ದಿಕೊಳ್ಳಿ ಈ ರೀತಿ ಮುಂದೆ ಮಾತನಾಡಿದರೆ ಉಗ್ರ ಹೋರಾಟ ಮಾಡುವುದಾಗಿ ದೂರುದಾರ ಮಹಿಳೆಯರೊಬ್ಬರು ಎಚ್ಚರಿಕೆ ನೀಡಿದ್ದಾರೆ.ಇನ್ನು ಇದೇ ವಿಚಾರವಾಗಿ ನಿನ್ನೆ ಫಿಲಂ ಚೇಂಬರ್‌ಗೆ ದೂರು ಸಲ್ಲಿಸಲಾಗಿತ್ತು ಅಲ್ಲದೆ ಗೌಡ್ತಿ ಸಂಘಟನೆಗಳಿಂದ ಕೂಡ ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ನಿನ್ನೆ ದೂರು ಸಲ್ಲಿಸಲಾಗಿತ್ತು ಇದೀಗ ಮತ್ತೊಂದು ದೂರು ದಾಖಲಾಗಿರುವುದರಿಂದ ನಟ ದರ್ಶನ್ ಗೆ ಇನ್ನೊಂದು ಸಂಕಷ್ಟ ಎದುರಾಗಿದೆ.