ನಕಲಿ ಪೇಮೆಂಟ್‌ ಆಯಪ್‌ ಬಳಸಿ ದೋಖಾ ಮಾಡುತ್ತಿದ್ದ ಇಬ್ಬರ ಬಂಧನ

ಬೆಂಗಳೂರು: ಯುಪಿಐ ಮೂಲಕ ಹಣ ಪಾವತಿಸಿ ಮೊಬೈಲ್‌ನಲ್ಲಿ ನಕಲಿ ರಶೀದಿ ತೋರಿಸಿ ಚಿನ್ನಾಭರಣ ಮಳಿಗೆ ಮಾಲೀಕನಿಗೆ ಲಕ್ಷಾಂತರ ರೂ. ವಂಚಿಸಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ

ಆರೋಪಿ ಗಳಿಂದ ಚಿನ್ನಾಭರಣ ವಶಕ್ಕೆ ಪಡೆಯ ಲಾಗಿದೆ.
ದೇವನಹಳ್ಳಿ ನಿವಾಸಿ ನಂದನ್‌(40) ಮತ್ತು ಆಕೆಯ ಪ್ರಿಯತಮೆ ರಾಜರಾಜೇಶ್ವರಿನಗರ ನಿವಾಸಿ ಕಲ್ಪಿತಾ(35) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಇತ್ತೀಚೆಗೆ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್‌ ಆಯಂಡ್‌ ಜ್ಯುವೆಲರ್ಸ್‌ನಲ್ಲಿ 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿ, ನಕಲಿ ಆಯಪ್‌ ಮೂಲಕ 2.29 ಲಕ್ಷ ರೂ. ಪಾವತಿಸಿ ವಂಚಿಸಿದ್ದರು. ಈ ಸಂಬಂಧ ಮಳಿಗೆ ಮಾಲೀಕ ಗೇರ್ವಚಂದ್‌ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ನಂದನ್‌ಗೆ ಈಗಾಗಲೇ ಮದುವೆ ಯಾಗಿದ್ದು, ಪತ್ನಿಯಿಂದ ದೂರವಾ ಗಿದ್ದಾನೆ. ಇತ್ತ ಕಲ್ಪಿತಾ ಕೂಡ ಪತಿಯಿಂದ ದೂರವಾಗಿ ಒಂಟಿಯಾಗಿ ವಾಸವಾಗಿ ದ್ದಳು. ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯ ವಾದ ಆರೋಪಿಗಳು ಕೆಲ ತಿಂಗ ಳಿಂದ ಸಹ ಜೀವನ ನಡೆಸುತ್ತಿ ದ್ದಾರೆ. ಇಬ್ಬರು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಈ ಮಧ್ಯೆ ಫ್ರಾಂಕ್‌ ಪೇಮೆಂಟ್‌ ಎಪಿಕೆ ಆಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಚಿನ್ನಾಭರಣ ಮಳಿಗೆಗಳು, ಹೋಟೆಲ್‌, ದಿನಸಿ ಅಂಗಡಿ ಸೇರಿ ವಿವಿಧೆಡೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ ಈ ಆಯಪ್‌ ಮೂಲಕ ಹಣ ಪಾವತಿಸುತ್ತಿದ್ದರು. ಬಳಿಕ ತಮ್ಮ ಮೊಬೈಲ್‌ನಲ್ಲಿ ಪೇಮೆಂಟ್‌ ಆಗಿದೆ ಎಂಬ ಸಂದೇಶ ತೋರಿಸಿ, ಅಂಗಡಿ ಮಾಲೀಕರನ್ನು ವಂಚಿಸುತ್ತಿದ್ದರು.

ಮಾ.4ರಂದು ಬೆಳಗ್ಗೆ 9.30ಕ್ಕೆ ಆರೋಪಿಗಳು ಮಾಗಡಿ ಮುಖ್ಯರಸ್ತೆ ಯಲ್ಲಿ ರುವ ಪರಮೇಶ್ವರ ಬ್ಯಾಂಕರ್ಸ್‌ ಮತ್ತು ಜ್ಯುವೆಲರ್ಸ್‌ ಅಂಗಡಿಗೆ ಹೋಗಿ, 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿದ್ದಾರೆ. ಬಳಿಕ ತಮ್ಮ ಬಳಿ ನಗದು ಇಲ್ಲ. ನೆಫ್ಟ್ ಮೂಲಕ ಹಣ ಕಳುಹಿಸುತ್ತೇವೆ ಎಂದು 2,29,300 ರೂ. ನಕಲಿ ಆಯಪ್‌ ಮೂಲಕ ಹಣ ಜಮೆ ಮಾಡಿದ್ದಾರೆ. ಬಳಿಕ ಒಡವೆಗಳನ್ನು ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

Latest Indian news

Popular Stories