ಬೆಂಗಳೂರಿನಲ್ಲಿ ತಡರಾತ್ರಿ ʻಬೆಡ್‌ ಶೀಟ್‌ ಗ್ಯಾಂಗ್‌ʼ ನಿಂದ ʻATMʼ ಕಳ್ಳತನ : 16 ಲಕ್ಷ ರೂ.ಹಣ ದೋಚಿ ಪರಾರಿ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಬೆಡ್‌ ಶೀಟ್‌ ಸುತ್ತಿಕೊಂಡು ಬಂದ ಗ್ಯಾಂಗ್‌ ವೊಂದು ಎಟಿಎಂ ಹೊಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಬೆಳ್ಳಂದೂರು ಹಾಗೂ ಹೊಸರಿನಲ್ಲಿ ಕಳ್ಳರ ಗ್ಯಾಂಗ್‌ ಗ್ಯಾಸ್‌ ಕಟ್ಟರ್‌ ಬಳಸಿ ಕಳ್ಳತನ ಮಾಡಿದ್ದು, ಬೆಳ್ಳಂದೂರಿನ ಎಂಟಿನಲ್ಲೇ 16, 56,800 ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ.

ಬೆಡ್‌ ಶೀಟ್‌ ಸುತ್ತಿಕೊಂಡು ಬಂದ ಗ್ಯಾಂಗ್‌ ಮೊದಲಿಗೆ ಸಿಸಿ ಕ್ಯಾಮರಾಗೆ ಸ್ಟ್ರೇ ಹೊಡೆದಿದೆ. ಬಳಿಕ ಗ್ಯಾಸ್‌ ಕಟ್ಟರ್‌ ಮೂಲಕ ಎಟಿಎಂ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಹೊರ ರಾಜ್ಯದಿಂದ ಬಂದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬೆಳ್ಳಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories